ಸಾಮಾನ್ಯವಾಗಿ ಕೌಸಲ್ಯಾ ಎಂದು ಕರೆಯಲ್ಪಡುವ ನಂದಿನಿ (ಜನನ ಕವಿತಾ ; ೩೦ ಡಿಸೆಂಬರ್ ೧೯೭೯) ಒಬ್ಬ ಭಾರತೀಯ ನಟಿ ಮತ್ತು ರೂಪದರ್ಶಿ. ಇವರು ಮುಖ್ಯವಾಗಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ನಟಿಸಿದ್ದಾರೆ. ಪ್ರಮುಖ ಪಾತ್ರಗಳಲ್ಲಿ ತಮ್ಮ ವೃತ್ತಿಜೀವನವನ್ನು ಪ್ರಾರಂಭಿಸಿದ ನಂತರ ಅವರು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. == ವೃತ್ತಿ == ೧೯೯೬ರಲ್ಲಿ, ಬಾಲಚಂದ್ರ ಮೆನನ್ ಅವರ ನಿರ್ದೇಶನದ ಮಲಯಾಳಂ ಚಲನಚಿತ್ರ ಏಪ್ರಿಲ್ ೧೯ನಲ್ಲಿ ಅವರ ಚೊಚ್ಚಲ ಪ್ರವೇಶವನ್ನು ಪ್ರಾರಂಭಿಸುವ ಮೊದಲು, ನಂದಿನಿ ಅವರು ರೂಪದರ್ಶಿಯ ವೃತ್ತಿಜೀವನವನ್ನು ಅನುಸರಿಸುತ್ತಿದ್ದರು. ಮುಂದಿನ ವರ್ಷ, ಅವರು ಮುರಳಿ ಅವರ ಮೊದಲ ತಮಿಳು ಚಲನಚಿತ್ರ ಕಾಲಮೆಲ್ಲಂ ಕಾದಲ್ ವಾಜ್ಗ (೧೯೯೭) ನಲ್ಲಿ ಕಾಣಿಸಿಕೊಂಡರು ಮತ್ತು ನೆರುಕ್ಕು ನೇರ್ (೧೯೯೭), ಪ್ರಿಯಮುದನ್ (೧೯೯೮), ಸೊಲ್ಲಮಲೆ (೧೯೯೮), ಪೂವೇಲಿ (೧೯೯೮)ವನತೈಪ್ಪೋಲ (೨೦೦೦) ಮತ್ತು ಕುಟ್ಟಿ (೨೦೦೧) ಹೀಗೆ ಹಲವಾರು ಯಶಸ್ವಿ ಚಿತ್ರಗಳಲ್ಲಿ ನಟಿಸಿದರು. ಅವರು ಆಯಲ್ ಕದಾ ಎಳುತುಕಾಯನು (೧೯೯೮), ಕರುಮಡಿಕ್ಕುಟ್ಟನ್ (೨೦೦೧, ಸುಂದರ ಪುರುಷನ್ (೨೦೦೧), ಶಿವಂ (೨೦೦೨), ಉದಯಂ (೨೦೦೪), ವಜ್ರಂ (೨೦೦೪), ಮಾಣಿಕ್ಯನ್ (೨೦೦೪) ಮತ್ತು ಸೂರ್ಯನ್ (೨೦೦೭) ಸೇರಿದಂತೆ ಹಲವು ಮಲಯಾಳಂ ಚಿತ್ರಗಳಲ್ಲಿ ಕಾಣಿಸಿಕೊಂಡರು. ಅವರು ತಮಿಳು ಮತ್ತು ಮಲಯಾಳಂನಲ್ಲಿ ೩೦ ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ಪೂವೇಲಿಯಲ್ಲಿನ ಅಭಿನಯಕ್ಕಾಗಿ 'ತಮಿಳು - ಅತ್ಯುತ್ತಮ ನಟಿ' ಫಿಲ್ಮ್‌ಫೇರ್ ಪ್ರಶಸ್ತಿಯನ್ನು ಪಡೆದುಕೊಂಡರು. ಅವರು ಹೆಚ್ಚಾಗಿ ಸೀರೆಯುಟ್ಟು ಸಂಪ್ರದಾಯವಾದಿ ಪಾತ್ರಗಳಲ್ಲಿ ನಟಿಸಿದ್ದಾರೆ. ೨೦೦೦ ರ ದಶಕದ ಮಧ್ಯಭಾಗದಲ್ಲಿ, ಅವರು ಕ್ಯಾರೆಕ್ಟರ್ ಆರ್ಟಿಸ್ಟ್ ಆಗಿ ಮಾರ್ಪಟ್ಟರು ಮತ್ತು ತಿರುಮಲೈ (೨೦೦೩) ಮತ್ತು ಸಂತೋಷ್ ಸುಬ್ರಮಣ್ಯಂ (೨೦೦೮) ನಂತಹ ಚಲನಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ಅಭಿನಯಿಸಿದರು ಹಾಗೂ ಟಿವಿಯಲ್ಲಿ ೪೩೬ ಸಂಚಿಕೆಗಳನ್ನು ಪ್ರಸಾರ ಮಾಡಿದ ಮನೈವಿ ಸರಣಿಯೊಂದಿಗೆ ದೂರದರ್ಶನಕ್ಕೆ ಪ್ರವೇಶಿಸಿದರು. ೨೦೦೪ ರಲ್ಲಿ, ಅವರು ಪ್ರಮುಖ ನಟಿಯಾಗಿ ಮರಳಲು ಪ್ರಯತ್ನಿಸಿದರು ಆದರೆ ದುರದೃಷ್ಟವಶಾತ್ ಅವರ ಹಲವಾರು ಯೋಜನೆಗಳು ವಿಳಂಬವಾಯಿತು. ಪ್ರಶಾಂತ್ ಜೊತೆಯಲ್ಲಿ ನಟಿಸಿದ ತ್ಯಾಗರಾಜನ್ ಅವರ ಪೋಲೀಸ್, ಕಾರ್ತಿಕ್ ಜೊತೆ ಮನದಿಲ್, ಸತ್ಯರಾಜ್ ಜೊತೆಯಲ್ಲಿ ವೆಂಡುಮಾಡಿ ನೀ ಎನಕ್ಕು ಮತ್ತು ರೋಸಪ್ಪು ಚಿನ್ನ ರೋಸಪ್ಪು ಮುಂತಾದ ಚಲನಚಿತ್ರಗಳು ಸಿದ್ಧವಾದವು ಆದರೆ ನಂತರ ಶೀಘ್ರವಾಗಿ ಸ್ಥಗಿತಗೊಂಡವು. ಕೌಸಲ್ಯ ೬ ವರ್ಷಗಳ ನಂತರ ಪೂಜಾಯ್ (೨೦೧೪) ಎಂಬ ಸಾಹಸ ಚಿತ್ರದೊಂದಿಗೆ ತಮಿಳು ಉದ್ಯಮಕ್ಕೆ ಮರಳಿದರು. == ವೈಯಕ್ತಿಕ ಜೀವನ == ಕೌಸಲ್ಯ ಹುಟ್ಟಿದ್ದು ಕರ್ನಾಟಕ ರಾಜ್ಯದ ಬೆಂಗಳೂರಿನಲ್ಲಿ. ಅವರ ತಂದೆ ಶಿವಶಂಕರ ಸಿದ್ದಲಿಂಗಪ್ಪನವರು ಬೆಂಗಳೂರಿನ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯಲ್ಲಿ ಡಿಪೋ ಮ್ಯಾನೇಜರ್ ಆಗಿ ಕೆಲಸ ಮಾಡುತ್ತಿದ್ದರು. ಅವರ ತಾಯಿ ಅರ್ಧ ಮರಾಠಿ ಮತ್ತು ಅರ್ಧ ಕನ್ನಡ ಮಾತನಾಡುವವರು. ಇವರು ಶ್ರೀಲಂಕಾದಲ್ಲಿ ಹುಟ್ಟಿ ಬೆಳೆದವರು. ಅವರ ಅಜ್ಜಿ ಶ್ರೀಲಂಕಾದವರು. == ಪ್ರಶಸ್ತಿಗಳು == ಫಿಲ್ಮ್‌ಫೇರ್ ಪ್ರಶಸ್ತಿ ದಕ್ಷಿಣ ೧೯೯೮ - ಅತ್ಯುತ್ತಮ ನಟಿಗಾಗಿ ಫಿಲ್ಮ್‌ಫೇರ್ ಪ್ರಶಸ್ತಿ - ತಮಿಳು - ಪೂವೇಲಿ == ಚಿತ್ರಕಥೆ == === ಚಲನಚಿತ್ರ === === ಸಂಗೀತ ವೀಡಿಯೊ === === ವೆಬ್ ಸರಣಿ === == ಉಲ್ಲೇಖಗಳು == == ಬಾಹ್ಯ ಕೊಂಡಿಗಳು == ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ [೧] ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ () ಅಂತರಜಾಲ ಸಿನೆಮಾ ದತ್ತಸಂಚಯದಲ್ಲಿ ( )